Vande Bharat Express :ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಇದೇ ಭಾನುವಾರ (ಆಗಸ್ಟ್ 10, 2025) ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ ಪಡೆಯಲಿದೆ. ಇದು ಕರ್ನಾಟಕದ 11ನೇ ವಂದೇ ಭಾರತ್ ರೈಲು ಆಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮತ್ತೆರಡು ಹೊಸ ವಂದೇ ಭಾರತ್ ರೈಲುಗಳಿಗೆ ಮತ್ತು ಬೆಂಗಳೂರು ಮೆಟ್ರೋ ಹೊಸ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.
ಮಾರ್ಗ ಮತ್ತು ನಿಲುಗಡೆಗಳು
ಈ ರೈಲು 06 ಜಿಲ್ಲೆಗಳ ಮಾರ್ಗವಾಗಿ ಸಂಚಾರ ಮಾಡಲಿದೆ:
- ಬೆಂಗಳೂರು (KSR)
- ತುಮಕೂರು
- ದಾವಣಗೆರೆ
- ಹಾವೇರಿ
- ಹುಬ್ಬಳ್ಳಿ
- ಧಾರವಾಡ
- ಬೆಳಗಾವಿ
ಪ್ರಯಾಣ ಸಮಯ:
- ಬೆಂಗಳೂರು (KSR) ನಿಂದ ಬೆಳಿಗ್ಗೆ 5:20ಕ್ಕೆ ಹೊರಟು, ಮಧ್ಯಾಹ್ನ 1:50ಕ್ಕೆ ಬೆಳಗಾವಿ ತಲುಪುವುದು (ಒಟ್ಟು 8 ಗಂಟೆ 30 ನಿಮಿಷ).
- ಬೆಳಗಾವಿಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ರಾತ್ರಿ 10:40ಕ್ಕೆ ಬೆಂಗಳೂರು ತಲುಪುವುದು.
ಟಿಕೆಟ್ ದರಗಳು (ಚೇರ್ ಕಾರ್)
- ಬೆಂಗಳೂರು–ಬೆಳಗಾವಿ: ₹1264
- ಬೆಂಗಳೂರು–ಧಾರವಾಡ: ₹1049
- ಬೆಂಗಳೂರು–ಹುಬ್ಬಳ್ಳಿ: ₹1090
- ಬೆಂಗಳೂರು–ಹಾವೇರಿ: ₹907
- ಬೆಂಗಳೂರು–ದಾವಣಗೆರೆ: ₹800
- ಬೆಂಗಳೂರು–ತುಮಕೂರು: ₹403
- ಬೆಂಗಳೂರು–ಯಶವಂತಪುರ: ₹344
ಈ ರೈಲು ಆರಂಭವಾಗುವುದರಿಂದ ಪ್ರಯಾಣಿಕರಿಗೆ ವೇಗವಾದ, ಆಧುನಿಕ ಮತ್ತು ಸುಗಮ ರೈಲು ಸೇವೆ ದೊರಕಲಿದ್ದು, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಉತ್ತೇಜನ ನೀಡಲಿದೆ.
ಗೃಹಲಕ್ಷ್ಮಿ ಯೋಜನೆ: ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಡಬಲ್ ಗಿಫ್ಟ್ — ಎರಡು ತಿಂಗಳ ಹಣ ಖಾತೆಗೆ ಜಮಾ!
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”