ಶೇ.50 ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಪಾವತಿಸುವ ಸುಲಭ ವಿಧಾನ !

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

50 % off Traffic Fine:ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದ ದಂಡವನ್ನು ಪಾವತಿಸಲು ಬೆಂಗಳೂರು ಸಂಚಾರಿ ಪೊಲೀಸರು ಶೇ.50ರ ರಿಯಾಯಿತಿ ಘೋಷಣೆ ಮಾಡಿದ್ದಾರೆ. 2023ರ ಫೆಬ್ರವರಿ 11ರೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು, ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ದಂಡ ಪಾವತಿಸಿದರೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಬಾರಿ ಇಂತಹ ಯೋಜನೆಗೆ ವಾಹನ ಸವಾರರಿಂದ ಭಾರೀ ಪ್ರತಿಕ್ರಿಯೆ ಬಂದಿತ್ತು. ಈ ಬಾರಿ ಕೂಡ ಸಾವಿರಾರು ಮಂದಿ ಬಾಕಿ ಉಳಿದ ದಂಡವನ್ನು ಕ್ಲಿಯರ್ ಮಾಡುವ ನಿರೀಕ್ಷೆಯಿದೆ.

ವಾಹನ ಸವಾರರು ತಮ್ಮ ಹೆಸರಿನ ಮೇಲೆ ಬಾಕಿ ಇರುವ ದಂಡವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಿಂದ ಪಾವತಿಸಬಹುದು. ಆನ್‌ಲೈನ್ ಮೂಲಕ ಪಾವತಿಸಲು KSP App ಅಥವಾ BTP ASTraM App ಡೌನ್‌ಲೋಡ್ ಮಾಡಿಕೊಂಡು, ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ದಂಡ ವೀಕ್ಷಿಸಬಹುದು. ನಂತರ ಪಾವತಿಸಬೇಕಾದ ಮೊತ್ತದಲ್ಲಿ ಶೇ.50ರ ರಿಯಾಯಿತಿ ದರ ತೋರಿಸಲಾಗುತ್ತದೆ. ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮೂಲಕ ದಂಡ ಪಾವತಿಸುವ ಅವಕಾಶವಿದೆ. ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲೂ ಪಾವತಿಸಬಹುದಾಗಿದೆ.

📢 Stay Updated! Join our WhatsApp Channel Now →

ಇದೇ ರೀತಿ ಆಫ್‌ಲೈನ್ ಮೂಲಕ ಪಾವತಿಸಲು ಹತ್ತಿರದ ಸಂಚಾರಿ ಪೊಲೀಸ್ ಠಾಣೆ ಅಥವಾ ಸಂಚಾರಿ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಕೌಂಟರ್‌ನಲ್ಲಿ ನೇರವಾಗಿ ದಂಡ ಪಾವತಿಸಬಹುದು. ವಾಹನ ನೋಂದಣಿ ಸಂಖ್ಯೆಯನ್ನು ನೀಡಿದ ಬಳಿಕ ಬಾಕಿ ಇರುವ ದಂಡದಲ್ಲಿ ರಿಯಾಯಿತಿಯನ್ನು ಲೆಕ್ಕ ಹಾಕಿ ತೋರಿಸಲಾಗುತ್ತದೆ. ನಂತರ ಕೌಂಟರ್‌ನಲ್ಲೇ ಕಡಿಮೆ ಮೊತ್ತ ಪಾವತಿಸಿ ಪ್ರಕರಣವನ್ನು ಮುಚ್ಚುವ ಅವಕಾಶ ಸಿಗುತ್ತದೆ.

ಪೊಲೀಸರು ನೀಡಿರುವ ಈ ವಿಶೇಷ ಸೌಲಭ್ಯವು ದಂಡ ಪಾವತಿಸದೆ ಉಳಿಸಿಕೊಂಡಿರುವ ವಾಹನ ಸವಾರರಿಗೆ ದೊಡ್ಡ ಅನುಕೂಲವಾಗಲಿದೆ. ಪಾವತಿ ಅವಧಿ ಕೇವಲ ಮೂರು ವಾರ ಮಾತ್ರ ಇರುವುದರಿಂದ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ

Leave a Comment