ಎಲ್‌ಪಿಜಿ ಗ್ಯಾಸ್ ಸಿಲಿಂಡರ್: ಭರ್ಜರಿ ಡಿಸ್ಕೌಂಟ್ ದರದಲ್ಲಿ ಲಭ್ಯ

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Lpg Gas Price:ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ ಮಧ್ಯಮ ವರ್ಗದ ಮನೆಮಂದಿಗೆ ಹೊರೆ ಹೆಚ್ಚಾಗಿದೆ. ಇತ್ತೀಚೆಗೆ 50 ರೂಪಾಯಿ ದರ ಏರಿಕೆ ಜಾರಿಯಾದ ಹಿನ್ನೆಲೆಯಲ್ಲಿ ಗ್ರಾಹಕರು ತೊಂದರೆ ಅನುಭವಿಸುತ್ತಿರುವ ವೇಳೆ, ಇದೀಗ ಒಂದು ಶುಭಸುದ್ದಿ ಹೊರಬಿದ್ದಿದೆ. ಭರ್ಜರಿ ಡಿಸ್ಕೌಂಟ್‌ ಆಫರ್‌ಗಳೊಂದಿಗೆ ಗೃಹಬಳಕೆ ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯವಾಗಿ ವಾಣಿಜ್ಯ ಸಿಲಿಂಡರ್‌ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತವೆ. ಆದರೆ ಗೃಹಬಳಕೆ ಸಿಲಿಂಡರ್‌ ದರವನ್ನು ಯಾವಾಗ ಬೇಕಾದರೂ ಪರಿಷ್ಕರಿಸುವ ಅವಕಾಶವಿದೆ. ಇದೀಗ ಗೃಹ ಬಳಕೆದಾರರಿಗೆ ತುಸು ಹಣ ಉಳಿಯುವಂತೆಯೂ, ಆರ್ಥಿಕ ಭಾರ ತಗ್ಗುವಂತೆಯೂ ಕೆಲವು ವಿಶೇಷ ಡಿಸ್ಕೌಂಟ್‌ ಆಫರ್‌ಗಳನ್ನು ಘೋಷಿಸಲಾಗಿದೆ.

📢 Stay Updated! Join our WhatsApp Channel Now →

ಪ್ರಸ್ತುತ ಗೃಹಬಳಕೆ ಗ್ಯಾಸ್ ಸಿಲಿಂಡರ್‌ ಬೆಲೆ ₹870ಕ್ಕಿಂತ ಅಧಿಕವಾಗಿದ್ದು, ಇದು ಸಾಮಾನ್ಯ ಕುಟುಂಬಗಳಿಗೆ ಹೊರೆ ಆಗುತ್ತಿದೆ. ಆದರೆ ಗ್ರಾಹಕರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಿಲಿಂಡರ್‌ ಬುಕ್ ಮಾಡಿದರೆ ವಿಶೇಷ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮುಂತಾದ ಅಪ್ಲಿಕೇಶನ್‌ಗಳಲ್ಲಿ ಬುಕ್ಕಿಂಗ್ ಸೌಲಭ್ಯ ಲಭ್ಯವಿದ್ದು, ಪಾವತಿಸುವಾಗ ಪ್ರೋಮೋ ಕೋಡ್ ಬಳಸಿ ಗ್ರಾಹಕರು ಡಿಸ್ಕೌಂಟ್ ಪಡೆಯಬಹುದು.

ಪೇಟಿಎಂ ಸಂಸ್ಥೆ ಭರ್ಜರಿ ಆಫರ್‌ಗಳನ್ನು ನೀಡಿದ್ದು, ಗರಿಷ್ಠ ₹150 ರಿಯಾಯಿತಿ ಪಡೆಯುವ ಅವಕಾಶ ಕಲ್ಪಿಸಿದೆ. ಎಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಕನಿಷ್ಠ ₹499 ಮೌಲ್ಯದ ವಹಿವಾಟು ಮಾಡಿದರೆ 5% ರಿಯಾಯಿತಿಗೆ ಅರ್ಹರಾಗುತ್ತಾರೆ. ಇದಕ್ಕಾಗಿ HSBC150 ಪ್ರೋಮೋ ಕೋಡ್ ಬಳಸಬೇಕು. ಈ ಆಫರ್ ಸೆಪ್ಟೆಂಬರ್ 30, 2025ರವರೆಗೆ ಮಾನ್ಯವಾಗಿರಲಿದೆ.

ಅದರ ಜೊತೆಗೆ ಫೆಡರಲ್ ಬ್ಯಾಂಕ್‌ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಗರಿಷ್ಠ ₹150 ರಿಯಾಯಿತಿಯನ್ನು ಪಡೆಯಬಹುದು. ಇದರಿಗಾಗಿ FEDERAL150 ಪ್ರೋಮೋ ಕೋಡ್ ಬಳಸಬೇಕು. ಈ ಆಫರ್‌ಗಾಗಿ ಕನಿಷ್ಠ ವಹಿವಾಟಿನ ಮೊತ್ತ ₹199 ಆಗಿರಬೇಕು.

ಇಂಡಸ್ ಇಂಡ್ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರು 10% ರಿಯಾಯಿತಿ (ಗರಿಷ್ಠ ₹50) ಪಡೆಯುವ ಅವಕಾಶವಿದೆ. ಇದಕ್ಕಾಗಿ INDDC50 ಪ್ರೋಮೋ ಕೋಡ್ ಬಳಸಬೇಕು. ಈ ಆಫರ್‌ಗೆ ಕನಿಷ್ಠ ವಹಿವಾಟಿನ ಮೊತ್ತ ₹299 ಆಗಿರಬೇಕು.

ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು RBL50 ಕೋಡ್ ಬಳಸಿ ₹50 ರಿಯಾಯಿತಿ ಪಡೆಯಬಹುದು. ಆದರೆ ಇದರ ಷರತ್ತು ಏನೆಂದರೆ ಕನಿಷ್ಠ ₹999 ಮೌಲ್ಯದ ವಹಿವಾಟು ಮಾಡಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಕೂಡ PNBCC ಕೋಡ್ ಬಳಸಿ ₹50 ರಿಯಾಯಿತಿ ಪಡೆಯಬಹುದು.

ಈ ಎಲ್ಲಾ ಆಫರ್‌ಗಳು ಸೆಪ್ಟೆಂಬರ್ ಅಂತ್ಯದವರೆಗೆ ಮಾತ್ರ ಮಾನ್ಯವಾಗಿದ್ದು, ಗ್ರಾಹಕರು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಈ ಅವಕಾಶವನ್ನು ಬಳಸಿಕೊಳ್ಳುವುದು ಒಳಿತು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಿಲಿಂಡರ್ ಬುಕ್ ಮಾಡಿ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಖರ್ಚು ಕಡಿಮೆಯಾಗಲಿದೆ.

ಬಿಪಿಎಲ್‌ ಪಡಿತರ ಚೀಟಿಗಳ ಕುರಿತು ಆಹಾರ ಸಚಿವರಿಂದ ಬಿಗ್‌ ಅಪ್ಡೇಟ್‌

Leave a Comment