ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆ: 115 ತಿಂಗಳಲ್ಲಿ ಹೂಡಿಕೆ ಮೊತ್ತ ದ್ವಿಗುಣ

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Kisan Vikas Patra Scheme :ಸರ್ಕಾರವು ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ದೀರ್ಘಾವಧಿಯ ಆದಾಯವನ್ನು ಒದಗಿಸುವ ಉದ್ದೇಶದಿಂದ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP) ಉಳಿತಾಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವು 115 ತಿಂಗಳಲ್ಲಿ ದ್ವಿಗುಣಗೊಳ್ಳುವುದು ಪ್ರಮುಖ ವೈಶಿಷ್ಟ್ಯವಾಗಿದೆ.

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದವರಿಗೆ ಪ್ರಸ್ತುತ 7.5% ಬಡ್ಡಿದರ ಲಭ್ಯವಿದೆ. ಉದಾಹರಣೆಗೆ, ₹1 ಲಕ್ಷ ಹೂಡಿಕೆ ಮಾಡಿದಲ್ಲಿ 115 ತಿಂಗಳ ಬಳಿಕ ಅದು ₹2 ಲಕ್ಷ ರೂಪಾಯಿಗಳಾಗುತ್ತದೆ. ಅದೇ ರೀತಿ, ₹10 ಲಕ್ಷ ರೂಪಾಯಿ ಹೂಡಿಕೆ ಮಾಡಿದಲ್ಲಿ ಅವಧಿ ಪೂರೈಸಿದ ನಂತರ ₹20 ಲಕ್ಷ ರೂಪಾಯಿ ಸಿಗುತ್ತದೆ.

📢 Stay Updated! Join our WhatsApp Channel Now →

ಖಾತೆ ತೆರೆಯುವವರು:

  • ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ KVP ಖಾತೆ ತೆರೆಯಬಹುದು.
  • 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಹೆಸರಿನಲ್ಲಿ ಖಾತೆ ಹೊಂದಲು ಅರ್ಹರು.
  • ಅಪ್ರಾಪ್ತರು ಹಾಗೂ ಮಾನಸಿಕ ಅಸ್ಥಿರ ವ್ಯಕ್ತಿಗಳ ಪೋಷಕರು ಸಹ ಅವರ ಪರವಾಗಿ ಖಾತೆ ತೆರೆಯಬಹುದು.

ಕನಿಷ್ಠ ಹೂಡಿಕೆ ಮೊತ್ತ:

ಈ ಯೋಜನೆಯಲ್ಲಿ ಕನಿಷ್ಠ ₹1,000 ರಿಂದ ಹೂಡಿಕೆ ಪ್ರಾರಂಭಿಸಬಹುದಾಗಿದೆ. ಹೂಡಿಕೆಯ ಗರಿಷ್ಠ ಮಿತಿ ನಿಗದಿಪಡಿಸಿಲ್ಲ, ಹೂಡಿಕೆದಾರರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಪ್ರಮಾಣದ ಹಣವನ್ನು ಹೂಡಿಕೆ ಮಾಡಬಹುದು.

ಅಂಚೆ ಕಚೇರಿಯ ಈ ಯೋಜನೆ ದೀರ್ಘಾವಧಿ ಉಳಿತಾಯ ಹಾಗೂ ಖಚಿತ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಸುರಕ್ಷಿತ ಮಾರ್ಗವಾಗಿದ್ದು, ಸರ್ಕಾರದ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.

Leave a Comment