ರೇಣುಕಾಸ್ವಾಮಿ ಕೊ*ಲೆ ಪ್ರಕರಣ: ದರ್ಶನ್–ಪವಿತ್ರಾ ಸೇರಿ 7 ಮಂದಿಯ ಜಾಮೀನು ರದ್ದು – ಸುಪ್ರೀಂಕೋರ್ಟ್ ತೀರ್ಪು

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Darshan case : ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನುಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಜಾಮೀನು ರದ್ದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವಾದ ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಮಹದೇವನ್ ಗುರುವಾರ ತೀರ್ಪು ಪ್ರಕಟಿಸಿತು.

ಜಾಮೀನು ರದ್ದಾದ ಆರೋಪಿ ಸಂಖ್ಯೆ/ಹೆಸರುಗಳು

  • A1 ಪವಿತ್ರಾ ಗೌಡ
  • A2 ದರ್ಶನ್
  • A6 ಜಗದೀಶ್ ಅಲಿಯಾಸ್ ಜಗ್ಗ
  • A7 ಅನುಕುಮಾರ್ ಅಲಿಯಾಸ್ ಅನು
  • A11 ನಾಗರಾಜು ಅಲಿಯಾಸ್ ನಾಗ
  • A12 ಲಕ್ಷ್ಮಣ
  • A14 ಪ್ರದೋಶ್

ನ್ಯಾಯಾಲಯದ ಗಮನಾರ್ಹ ಅಭಿಪ್ರಾಯ

ರಾಜ್ಯ ಸರ್ಕಾರದ ಪರವಾಗಿ, ಪ್ರಕರಣದಲ್ಲಿನ ಎಫ್‌ಎಸ್‌ಎಲ್, ಎಲೆಕ್ಟ್ರಾನಿಕ್, ಸಿಡಿಆರ್ ಪುರಾವೆಗಳು ಹಾಗೂ ಮಣ್ಣು/ರಕ್ತದ ಮಾದರಿ ಹೊಂದಾಣಿಕೆ ಸೇರಿದಂತೆ ಸಾಕ್ಷಿಗಳನ್ನು ಹೈಕೋರ್ಟ್ ಸಮರ್ಪಕವಾಗಿ ಪರಿಗಣಿಸಲಿಲ್ಲ ಎಂಬ ವಾದ ಮಂಡಿಸಲಾಯಿತು. ಹೈಕೋರ್ಟ್ ಜಾಮೀನು ನೀಡುವ ವೇಳೆ “ಮಿನಿ ಟ್ರಯಲ್” ನಡೆದು ಹೋಗಿದೆಯೆಂಬ ಆಕ್ಷೇಪವನ್ನೂ ಸರ್ಕಾರ ಮುಂದಿಟ್ಟಿತ್ತು. ಸುಪ್ರೀಂ ಕೋರ್ಟ್ ಈ ಆಕ್ಷೇಪಗಳಿಗೆ ಒಪ್ಪಿಯಾಗಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನಲೆ (ಸಂಕ್ಷಿಪ್ತ)

📢 Stay Updated! Join our WhatsApp Channel Now →

ಮೃ*ತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು, ಇನ್‌ಸ್ಟಾಗ್ರಾಂ ಸಂದೇಶ ವಿವಾದದ ಬಳಿಕ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಗಂಭೀರ ಆರೋಪಗಳು ಹೊರಕೊಂಡಿವೆ. ತನಿಖೆ ವೇಳೆ ಕೊಲೆ ಸ್ಥಳದ ಮಣ್ಣು ಮಾದರಿ ಹಾಗೂ ಕೆಲವು ಆರೋಪಿಗಳ ಪಾದರಕ್ಷೆ/ಬಟ್ಟೆಗಳಲ್ಲಿ ರಕ್ತದ ಕಲೆಗಳ ಹೊಂದಾಣಿಕೆ ವರದಿಗಳು ದೊರೆತಿದೆಯೆಂದು ಸರ್ಕಾರ ತಿಳಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ, ಸಂಬಂಧಿತ ಆರೋಪಿಗಳ ಜಾಮೀನುಗಳು ಅಮಾನ್ಯಗೊಂಡಿದ್ದು, ಮುಂದಿನ ಕಾನೂನು ಕ್ರಮಗಳಿಗೆ ದಾರಿ ತೆರೆದಿದೆ.

ಆಸ್ತಿ ಖರೀದಿಸಿದ ನಂತರ ಈ ಕೆಲಸ ಮಾಡದೇ ಇದ್ದರೆ ಮಾಲೀಕತ್ವದ ಹಕ್ಕುಗಳು ಸಿಗುವುದಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Leave a Comment