bhagyalakshmi scheme — 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಬಾಂಡ್ ಪಡೆದ ಫಲಾನುಭವಿಗಳ ಮೆಚ್ಯೂರಿಟಿ ಅವಧಿ 2024-25ರಲ್ಲಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಇನ್ನೂ ಪ್ರಸ್ತಾವನೆ ಸಲ್ಲಿಸದವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೂಚಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಾರಿಗೆ ಬಂದಿದ್ದ ಈ ಯೋಜನೆಯಲ್ಲಿ, ವಲಸೆ ಹೋದವರು ಅಥವಾ ವಿಳಾಸ ಪತ್ತೆಯಾಗದ ಫಲಾನುಭವಿಗಳ ಅರ್ಜಿ ಇನ್ನೂ ಆನ್ಲೈನ್ನಲ್ಲಿ ಸಲ್ಲಿಕೆಯಾಗಿ ಇಲ್ಲ.
ಸಂಬಂಧಿತ ದಾಖಲೆಗಳೊಂದಿಗೆ ಅಕ್ಟೋಬರ್ 2025 ಅಂತ್ಯದೊಳಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ಯೋಜನೆ ಪ್ರಾರಂಭ:
ಹೆಣ್ಣುಮಕ್ಕಳ ಸ್ಥಾನವನ್ನು ಕುಟುಂಬ ಮತ್ತು ಸಮಾಜದಲ್ಲಿ ಹೆಚ್ಚಿಸಲು, ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 2006-07ರಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಪ್ರಾರಂಭಿಸಲಾಯಿತು.
ಯಾರು ಅರ್ಹರು?
- 31.03.2006 ನಂತರ ಜನಿಸಿದ ಹೆಣ್ಣುಮಕ್ಕಳು.
- ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು.
- ಕುಟುಂಬದಲ್ಲಿ ಗರಿಷ್ಠ 2 ಹೆಣ್ಣುಮಕ್ಕಳಿಗೆ ಮಾತ್ರ.
- ತಂದೆ/ತಾಯಿ ಶಾಶ್ವತ ಕುಟುಂಬ ಯೋಜನೆ ಅನುಸರಿಸಿರಬೇಕು.
- ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚು ಇರಬಾರದು.
- 18 ವರ್ಷ ತುಂಬುವವರೆಗೆ ಮದುವೆಯಾಗಬಾರದು.
- 8ನೇ ತರಗತಿ ಉತ್ತೀರ್ಣವಾಗಿರಬೇಕು.
ಯೋಜನೆಯಡಿ ಸೌಲಭ್ಯಗಳು:
- ಪ್ರಾರಂಭಿಕ ಠೇವಣಿ: ರೂ.10,000/- (ಹಳೆ ಯೋಜನೆ) ಅಥವಾ ರೂ.19,300/- (ಪರಿಷ್ಕೃತ – ಮೊದಲ ಮಗು), ರೂ.18,350/- (ಎರಡನೇ ಮಗು) ಪಾಲುದಾರ ಬ್ಯಾಂಕ್/ಹಣಕಾಸು ಸಂಸ್ಥೆಯಲ್ಲಿ.
- ಮೆಚ್ಯೂರಿಟಿ ಮೊತ್ತ: 18 ವರ್ಷ ನಂತರ ಶರತ್ತುಗಳನ್ನು ಪೂರೈಸಿದಲ್ಲಿ ರೂ.34,751/- ರಿಂದ ರೂ.1,00,097/- ವರೆಗೆ.
- ವಿದ್ಯಾರ್ಥಿ ವೇತನ: ಪ್ರಾಥಮಿಕದಿಂದ 10ನೇ ತರಗತಿವರೆಗೆ ವಾರ್ಷಿಕ ರೂ.300/-ರಿಂದ ರೂ.1000/-ವರೆಗೆ (ಹಳೆಯ ಯೋಜನೆ).
- ವಿಮೆ ಸೌಲಭ್ಯ:
- ಸ್ವಾಭಾವಿಕ ಸಾವು: ರೂ.42,500/-
- ಅಪಘಾತ ಮರಣ: ರೂ.1,00,000/-
- ಆರೋಗ್ಯ ವಿಮೆ: ಗರಿಷ್ಠ ರೂ.25,000/-
ಪ್ರಮುಖ ನಿಯಮಗಳು:
- ಜನನ ನೋಂದಣಿ ಕಡ್ಡಾಯ.
- ರೋಗನಿರೋಧಕ ಲಸಿಕೆ ಹಾಕಿಸಿರಬೇಕು.
- ಅಂಗನವಾಡಿ/ಶಾಲೆಯಲ್ಲಿ ದಾಖಲಾಗಿರಬೇಕು.
- ಬಾಲಕಾರ್ಮಿಕಳಾಗಬಾರದು.
- 18 ವರ್ಷದೊಳಗೆ ಮದುವೆಯಾದರೆ ಅಥವಾ ಮರಣ ಹೊಂದಿದರೆ ಠೇವಣಿ ಸರ್ಕಾರಕ್ಕೆ ವಾಪಸ್.
ಪರಿಷ್ಕರಣೆ (2008):
01.08.2008 ನಂತರ ಜನಿಸಿದ ಮಕ್ಕಳಿಗೆ ಠೇವಣಿ ಮೊತ್ತ ಹಾಗೂ ಮೆಚ್ಯೂರಿಟಿ ಮೊತ್ತ ಹೆಚ್ಚಿಸಲಾಗಿದೆ. 10ನೇ ತರಗತಿ ಉತ್ತೀರ್ಣಳಾಗಿ, ಮುಂದಿನ ವಿದ್ಯಾಭ್ಯಾಸಕ್ಕೆ ಬಾಂಡ್ ಅಡಮಾನವಿಟ್ಟು ಗರಿಷ್ಠ ರೂ.50,000/- ಸಾಲ ಪಡೆಯಲು ಅವಕಾಶ ನೀಡಲಾಗಿದೆ.
ಯೋಜನೆಯ ಸಾಧನೆ (2006-07 ರಿಂದ 2013-14):
- ಒಟ್ಟು ವೆಚ್ಚ: ರೂ.2908.09 ಕೋಟಿ
- ಫಲಾನುಭವಿಗಳು: 18,10,176
- 2013-14ಕ್ಕೆ ಬಾಂಡ್ ವಿತರಣೆಗಾಗಿ ರೂ.396.43 ಕೋಟಿ ಮೀಸಲಾತಿ.
ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ‘ಅರಣ್ಯ ವೀಕ್ಷಕ’ ಹುದ್ದೆಗಳ ಶೀಘ್ರ ನೇಮಕಾತಿ – ಅರಣ್ಯ ಸಚಿವ ಈಶ್ವರ್ ಖಂಡ್ರೆ
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”