Bele Vime – ಈ ಪ್ರಮುಖ ಬೆಳೆಗಳ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Bele Vime – ಶಿವಮೊಗ್ಗ: ಜಿಲ್ಲೆಯ ರೈತರಿಗೆ ಶುಭವಾರ್ತೆ! ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ 2025-26 ನೇ ಸಾಲಿನ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ನೋಂದಣಿ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

ಹಿಂದೆ ಜುಲೈ 31 ರವರೆಗೆ ನಿಗದಿಯಾಗಿದ್ದ ಅವಧಿಯನ್ನು ಇದೀಗ ಸಾಲವಿಲ್ಲದ ರೈತರಿಗೆ ಆಗಸ್ಟ್ 14 ಮತ್ತು ಸಾಲ ಪಡೆದ ರೈತರಿಗೆ ಆಗಸ್ಟ್ 30 ರವರೆಗೆ ವಿಸ್ತರಿಸಲಾಗಿದೆ.

📢 Stay Updated! Join our WhatsApp Channel Now →

ವಿಮೆ ನೋಂದಣಿಗೆ ಅಗತ್ಯ ದಾಖಲೆಗಳು:

  • ಪ್ರಸಕ್ತ ಸಾಲಿನ ಪಹಣಿ (RTC)
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಆಧಾರ್ ಕಾರ್ಡ್

ನೋಂದಣಿ ಮಾಡಲು ಎಲ್ಲಿಗೆ ಹೋಗಬೇಕು?

  • ಸಂಬಂಧಿತ ಬ್ಯಾಂಕ್‌ಗಳು
  • ಸಮೀಪದ ಗ್ರಾಮ ಒನ್ ಕೇಂದ್ರಗಳು
  • ಸಾರ್ವಜನಿಕ ಸೇವಾ ಕೇಂದ್ರಗಳು (CSC)

ಸಂಪರ್ಕ ಮಾಹಿತಿಗಳು:

  • ಶಿವಮೊಗ್ಗ: 08182-279415 / 9900046087
  • ಭದ್ರಾವತಿ: 08282-295029 / 9108252536
  • ಶಿಕಾರಿಪುರ: 08187-223544 / 8310662972
  • ಸೊರಬ: 08184-295112 / 9900046117
  • ಸಾಗರ: 08183-295124 / 9449177200
  • ತೀರ್ಥಹಳ್ಳಿ: 08181-228151 / 9108280642
  • ಹೊಸನಗರ: 08185-295364 / 9591695327

ಯೋಜನೆಯ ಸದುಪಯೋಗ ಪಡೆದುಕೊಳ್ಳಿ:

ಇದು ಒಂದು ಮಹತ್ವದ ಅವಕಾಶ. ಎಲ್ಲಾ ರೈತರು ವಿಮೆ ನೋಂದಣಿ ಅವಧಿ ಲಾಭ ಪಡೆದು, ಬೆಳೆ ವಿಮೆಯ ಸುರಕ್ಷತೆಗೆ ತಮ್ಮ ಹಕ್ಕು ಹೊಂದಿಕೊಳ್ಳಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Read More>>ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳಿಗೆ ಬ್ರೇಕ್! ರಾಜ್ಯದಲ್ಲಿ ‘ಭೂ ಸುರಕ್ಷಾ ಯೋಜನೆ’ಗೆ ಚಾಲನೆ

Leave a Comment