ಅಡಿಕೆ ಮಾರುಕಟ್ಟೆಯಲ್ಲಿ ಬದಲಾವಣೆ: ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ !

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike Rate :ಶ್ರಾವಣ ಮಾಸದ ಪ್ರಾರಂಭದೊಂದಿಗೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಅಡಕೆಯ ಬಳಕೆ ಹೆಚ್ಚಾಗುವುದರಿಂದ ಈಗಾಗಲೇ ಅದರ ದರ ಏರಿಕೆಯಾಗಿದೆ. ಪ್ರಸ್ತುತ ಅಡಿಕೆ ಪ್ರತಿ ಕ್ವಿಂಟಾಲ್ ₹200ರಿಂದ ₹300ರವರೆಗೆ ಬೆಲೆ ಹೆಚ್ಚಳವಾಗಿದೆ.

ರಾಜ್ಯದ ಅಡಕೆ ಖರೀದಿ ಕೇಂದ್ರಗಳಲ್ಲಿಯೂ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ.

📢 Stay Updated! Join our WhatsApp Channel Now →

ಈಗ ಅಡಿಕೆ ದರ ಎಷ್ಟು?

ರಾಜ್ಯದ ಪ್ರಮುಖ ಅಡಿಕೆಮಾರುಕಟ್ಟೆಗಳಾದ ಶಿವಮೊಗ್ಗ ,ದಾವಣಗೆರೆ , ಸುಳ್ಯ ಹಾಗೂ ಗಂಗೊಳ್ಳಿಯಲ್ಲಿಅಡಕೆಗೆ ₹39,000 ರಿಂದ ₹44,000ರ ದಾಟಿದ್ದು, ಈಗ ಅದು ₹41,000ರ ಸುತ್ತಲೂ ವ್ಯಾಪಾರವಾಗುತ್ತಿದೆ.

ಉತ್ತರ ಭಾರತದ ಬೇಡಿಕೆ ಹೆಚ್ಚಳ

ಅಡಿಕೆ ಬೆಲೆಯಲ್ಲಿ ಈಗಲೂ ಏರಿಕೆಯಾಗದಿರುವಾಗಲೇ ಉತ್ತರ ಭಾರತದಿಂದ ಬೃಹತ್ ಪ್ರಮಾಣದ ಬೇಡಿಕೆ ಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಿದ್ದು, ದರ ₹57,000ರ ಗಡಿ ದಾಟುವ ಸಾಧ್ಯತೆ ಇದೆ.

ಅಡಿಕೆ ತೇಜಿಗೆ ಕಾರಣಗಳು

  • ಮಳೆಗಾಲದ ಪರಿಣಾಮವಾಗಿ ಅಡಕೆ ಕೃಷಿಯಲ್ಲಿ ಪ್ರೋತ್ಸಾಹ ಕಡಿಮೆಯಾಗಿದೆ.
  • ಬೆಳೆ ಹಾನಿ ಹೆಚ್ಚಾಗಿದ್ದು, ಉತ್ಪಾದನೆ ಕಡಿಮೆಯಾಗಿದೆ.
  • ಅಡಿಕೆಯ ಉತ್ಪಾದನೆಯು ಕಳೆದ ವರ್ಷಕ್ಕಿಂತ ಕಡಿಮೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ವ್ಯಾಪಾರಿಗಳ ಅಭಿಪ್ರಾಯ

ಅಡಿಕೆಯ ಬೆಳೆ ಹಾನಿ, ಮಳೆ, ಸಂಗ್ರಹದ ಸಮಸ್ಯೆ, ಹಾಗೂ ಪೂರೈಕೆಯಲ್ಲಿ ಅಡಚಣೆಗಳು,ಇವುಗಳ ಹಿನ್ನೆಲೆಯಲ್ಲಿ ದರ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆ ಕಂಡುಬರಲಿದೆ.

Read More >>>ಅಡಿಕೆಗೆ ಬಂಪರ್ ಬೆಲೆ ಏರಿಕೆ: ಕ್ವಿಂಟಾಲ್‌ ಅಡಿಕೆ ಬೆಲೆ ಎಷ್ಟಿದೆ ?

Leave a Comment