ಅಡಿಕೆಗೆ ಬಂಪರ್ ಬೆಲೆ ಏರಿಕೆ: ಕ್ವಿಂಟಾಲ್‌ ಅಡಿಕೆ ಬೆಲೆ ಎಷ್ಟಿದೆ ?

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike Bele:ರಾಜ್ಯದಲ್ಲಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದ್ದು, ಇದರಿಂದಾಗಿ ರೈತ ಸಮುದಾಯದ ಮುಖದಲ್ಲಿ ಸಂತೋಷ ಮೂಡಿಸಿದೆ. ಇತ್ತೀಚೆಗೆ ಇಳಿಕೆಯಾಗಿದ್ದ ಧಾರಣೆ ಮತ್ತೆ ಚುರುಕು ಪಡೆದು, ಮುಂದಿನ ದಿನಗಳಲ್ಲಿ ಹೆಚ್ಚು ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಸೇರಿದಂತೆ ಈ ಭಾಗಗಳಲ್ಲಿ ಅಡಿಕೆ ಮುಖ್ಯ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.

ರಾಜ್ಯದ ಅಡಿಕೆ ಧಾರಣೆ ಹೀಗಿದೆ

ಈ ಮಧ್ಯೆ, ಜುಲೈ 31ರ ಅಡಿಕೆ ಮಾರುಕಟ್ಟೆ ದರಗಳ ಪ್ರಕಾರ,ಶಿವಮೊಗ್ಗ , ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ ಕ್ವಿಂಟಾಲ್‌ಗೆ ಗರಿಷ್ಠ ₹57,500, ಕನಿಷ್ಠ ₹53,679, ಮತ್ತು ಸರಾಸರಿ ₹56,368 ರೂಪಾಯಿ ಇದೆ. ಕೆಲವೇ ದಿನಗಳ ಹಿಂದೆ ಈ ಬೆಲೆಗಳು ಇಳಿಕೆ ಆಗಿದ್ದರೂ , ಈಗ ಮತ್ತೆ ಚೇತರಿಕೆ ಕಾಣುತ್ತಿದೆ.

📢 Stay Updated! Join our WhatsApp Channel Now →

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಪ್ರಸಕ್ತ ಬೆಳೆ ಅವಧಿ, ಮಳೆಯ ಪ್ರಮಾಣ, ಸಂಗ್ರಹಿತ ಅಡಿಕೆಯ ಪ್ರಮಾಣ ಮತ್ತು ಬೇಡಿಕೆಯ ಆಧಾರದ ಮೇಲೆ ಈ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಕ್ವಿಂಟಾಲ್‌ ಅಡಿಕೆ ಬೆಲೆ ₹60,000 ರಿಂದ ₹65,000 ರವರೆಗೆ ತಲುಪಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಕಳೆದ ಒಂದು ತಿಂಗಳ ಹಿಂದೆ ಬೆಲೆ ₹50,000ಕ್ಕೂ ಕೆಳಗಿಳಿದಿದ್ದ ಸಂದರ್ಭದಲ್ಲಿ ರೈತರು ನಿರಾಶೆಯಿಂದಿದ್ದರು. ಈಗ ಮರು ಏರಿಕೆ ಅವರು ಸಾಕಷ್ಟು ಲಾಭ ನಿರೀಕ್ಷಿಸುವಂತಾಗಿದೆ.

ಇಂತಹ ಸ್ಥಿತಿಯಲ್ಲಿ ರೈತರು ತಮ್ಮ ಉತ್ಪನ್ನ ಮಾರಾಟದ ಯೋಜನೆಗಳನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. ಬೆಲೆ ಮತ್ತಷ್ಟು ಏರಿದರೆ, ಮಾರುಕಟ್ಟೆಗೆ ಅಡಿಕೆಯನ್ನು ತಡವಾಗಿ ಬಿಡುಗಡೆ ಮಾಡುವ ಯೋಚನೆಯಲ್ಲಿರುವವರು ಹೆಚ್ಚು ಲಾಭ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಮಾರುಕಟ್ಟೆ ಚಲನವಲನದ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವ ಅಗತ್ಯವಿದೆ.

ಅಡಿಕೆ ಬೆಲೆಯಲ್ಲಿ ಈ ರೀತಿಯ ಏರಿಳಿತಗಳು ರೈತರ ಬದುಕಿನಲ್ಲಿ ನೇರ ಪರಿಣಾಮ ಬೀರುವ ಕಾರಣ, ಸರ್ಕಾರದ ಸಹಕಾರ, ವಿಮಾ ಯೋಜನೆಗಳು ಮತ್ತು ಬೆಳೆ ಸಮಿತಿ ನಿರ್ಧಾರಗಳು ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ವಿದ್ಯಾಸಿರಿ ಯೋಜನೆ : ಹಿಂದುಳಿದ ವರ್ಗ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

Leave a Comment