ಶನಿವಾರದ ಜ್ಯೋತಿಷ್ಯ ಫಲ: ಈ 3 ರಾಶಿಯವರು ನಿರೀಕ್ಷೆಯೇ ಇಲ್ಲದ ಸುದ್ದಿಯನ್ನು ಕೇಳಲಿದ್ದಾರೆ!

By Kavya GK

Published on:

Spread the love
WhatsApp Group Join Now
Telegram Group Join Now
Instagram Group Join Now

ಇಂದು ಚಂಚಲತೆ, ಅಧಿಕಾರ ಅಪೇಕ್ಷೆ, ಆಹಾರಕ್ಕೆ ಹೆಚ್ಚು ಖರ್ಚು, ಮಾತನ್ನು ಕೇಳದಿರುವುದು ಹಾಗೂ ಸ್ತ್ರೀಯರಿಂದ ಅಪಮಾನ ಅನುಭವಿಸುವ ಸೂಚನೆಗಳಿವೆ. ಆದರೆ ಅದೇ ಸಮಯದಲ್ಲಿ, ಕೆಲವರಿಗೆ ಸಂತೋಷದ ಕ್ಷಣಗಳು, ಹೊಸ ಅವಕಾಶಗಳು ಮತ್ತು ಪ್ರೀತಿಯ ಹಂಗುಗಳೂ ಎದುರಾಗಲಿವೆ.

ಮೇಷ ರಾಶಿ

ಇಂದು ನಿಮ್ಮ ಜೀವನದಲ್ಲಿ ಸ್ನೇಹಿತರೊಂದಿಗೆ ಮನದ ಭಾವನೆ ಹಂಚಿಕೊಳ್ಳುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಬೇಸರ ತಂದರೂ, ಕೆಲವೊಮ್ಮೆ ಸಂತೋಷ ತರಲಿದೆ. ಕೆಲಸದಲ್ಲಿ ತೊಂದರೆ ಇದ್ದರೂ ಕುಟುಂಬದ ಬೆಂಬಲ ಸಿಗುತ್ತದೆ. ವಾಹನ ರಿಪೇರಿಗೆ ಸಮಯ ವ್ಯರ್ಥವಾಗಬಹುದು. ಹೂವಿನ ವ್ಯವಹಾರದಲ್ಲಿ ಲಾಭ. ಮಕ್ಕಳೊಂದಿಗೆ ಸಂತೋಷದ ಮಾತುಕತೆ. ಸ್ತ್ರೀಯರಿಂದ ಸಣ್ಣ ಅಪಮಾನ ಸಾಧ್ಯ. ಆದರೆ ಕರ್ತವ್ಯನಿಷ್ಠೆಯಿಂದ ಮುಂದೆ ಸಾಗಿದರೆ ದಿನ ಯಶಸ್ವಿಯಾಗಲಿದೆ.

ವೃಷಭ ರಾಶಿ

📢 Stay Updated! Join our WhatsApp Channel Now →

ನಿಮ್ಮ ಸಿಟ್ಟಿನಿಂದ ಮಾಡಿದ ಕೆಲಸವೇ ಕೊನೆಗೆ ಸಮಾಧಾನ ತರಲಿದೆ. ಹಣ ಗಳಿಸುವ ಆಸೆ ತೀವ್ರವಾಗಿದ್ದರೂ ಅಡ್ಡಿ ಎದುರಾಗಲಿದೆ. ವಸ್ತು ಮಾರಾಟದ ನಿಮಿತ್ತ ಪ್ರಯಾಣ ಸಾಧ್ಯ. ನಿಮ್ಮ ವಿವರಗಳನ್ನು ಯಾರಿಗೂ ಹಂಚಿಕೊಳ್ಳದಿರುವುದು ಉತ್ತಮ. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗಬೇಕಾದೀತು. ವಿನಯವು ಇತರರ ಮೆಚ್ಚುಗೆಯನ್ನು ಗಳಿಸಲು ಸಹಾಯ ಮಾಡಲಿದೆ. ಅಪರಿಚಿತರ ಜೊತೆಗಿನ ಪರಿಚಯವು ಭವಿಷ್ಯದಲ್ಲಿ ಉಪಯೋಗವಾಗಬಹುದು.

ಮಿಥುನ ರಾಶಿ

ಹಳೆಯ ಸ್ನೇಹಿತರು ನಿಮ್ಮ ಬಳಿ ಹಣದ ಬೇಡಿಕೆಯನ್ನು ಇಡಬಹುದು. ಮನೆಯಲ್ಲಿ ಅಸಹಜ ವರ್ತನೆಯಿಂದ ಸಂಶಯಗಳು ಹುಟ್ಟಬಹುದು. ಹಿರಿಯರ ಸಲಹೆ ಕೇಳದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗದಲ್ಲಿ ಎದುರಾಗುವ ತೊಂದರೆಗಳನ್ನು ಶಾಂತವಾಗಿ ಬಗೆಹರಿಸಲು ಸಾಧ್ಯ. ಭೂಮಿ ಖರೀದಿಯ ಯೋಚನೆ ಇದ್ದರೆ ಹಿರಿಯರ ಮಾರ್ಗದರ್ಶನ ಅಗತ್ಯ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು.

ಕರ್ಕಾಟಕ ರಾಶಿ

ಇಂದು ಹಣ ಕಳೆದುಹೋದ ಭಾವನೆ ಉಂಟಾಗಬಹುದು. ಅನವಶ್ಯಕ ಖರ್ಚು ಹೆಚ್ಚಾಗುತ್ತದೆ. ಮನೆಗೆ ಸ್ವಲ್ಪ ಧನ ಸಹಾಯ ನೀಡಬೇಕಾಗಬಹುದು. ವಾಹನ ಖರೀದಿಯ ಆಲೋಚನೆ ಬರಬಹುದು. ಸಂಗಾತಿಯು ಹಳೆಯ ಆಸೆಯನ್ನು ಪೂರೈಸಬಹುದು. ಆದರೆ ನಿಮ್ಮ ಅನಗತ್ಯ ಮಾತುಗಳಿಂದ ವಾದವಿವಾದ ಹುಟ್ಟುವ ಸಾಧ್ಯತೆ ಇದೆ. ಸಾಲ ಮರುಪಾವತಿಗೆ ಸಮಯ ಕೇಳಬಹುದು. ಭಯದಿಂದ ದಿನವನ್ನು ಕಳೆಯಬಹುದು. ಹಿರಿಯರ ಬಳಿ ಮಾತನಾಡುವಾಗ ವಿನಯದಿಂದ ವರ್ತಿಸಿ.

ಸಿಂಹ ರಾಶಿ

ನಿಮ್ಮ ಉದ್ಯಮಕ್ಕೆ ಅಪ್ರತೀಕ್ಷಿತ ಸಹಕಾರ ದೊರಕಲಿದೆ. ಆದರೆ ಹಿತಶತ್ರುಗಳಿಂದ ತೊಂದರೆ ಸಾಧ್ಯ. ಕೆಲಸಗಳು ನಿರೀಕ್ಷಿತ ಸಮಯಕ್ಕೆ ಆಗದೆ ಬೇಸರವಾಗಬಹುದು. ಆದರೆ ಪರಿಶ್ರಮ ಮಾಡಿದರೆ ಅಡೆತಡೆಗಳಿಲ್ಲದೆ ಕೆಲಸ ಸಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಮುಂದುವರಿಯಬೇಕು.

ಕನ್ಯಾ ರಾಶಿ

ಮಕ್ಕಳ ಮೇಲಿನ ಮೋಹದಿಂದ ಅವರ ತಪ್ಪನ್ನು ಮನ್ನಿಸಬಹುದು. ಸ್ನೇಹಿತರಿಂದ ಮನೆ ತುಂಬುತ್ತದೆ. ಹಿರಿಯರ ವಿರುದ್ಧ ಮಾತನಾಡುವುದು ಉತ್ತಮವಲ್ಲ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಬಹುದು. ವಿದೇಶ ಪ್ರವಾಸದ ಅವಕಾಶ ತಂತ್ರಜ್ಞರಿಗೆ ಸಿಗಲಿದೆ. ಉದ್ಯಮವನ್ನು ನಡೆಸುವುದು ಕಷ್ಟವೆನಿಸಬಹುದು. ಖಾಸಗಿ ಸಂಸ್ಥೆಯ ಮಾಲಿಕತ್ವದ ಆಹ್ವಾನ ಬರಬಹುದು. ಕರ್ತವ್ಯಗಳಲ್ಲಿ ಅನ್ಯಮನಸ್ಕತೆ ತಪ್ಪಿಸಿಕೊಳ್ಳಿ.

ತುಲಾ ರಾಶಿ

ಸ್ತ್ರೀಯರಿಗೆ ಇಂದು ಅಭದ್ರತೆ ಹೆಚ್ಚಾಗಬಹುದು. ಸರ್ಕಾರದ ಕೆಲಸಗಳಲ್ಲಿ ತಪ್ಪು ಸಂಭವ. ಮನಸ್ಸಿನಲ್ಲಿ ಗೊಂದಲ ಹೆಚ್ಚಾಗುತ್ತದೆ. ವ್ಯರ್ಥ ಓಡಾಟ ಸಾಧ್ಯ. ದುರ್ವ್ಯಸನ ರೂಢಿಸುವ ಸಾಧ್ಯತೆ ಇದೆ. ಕುಟುಂಬದವರು ಸೇರಿಕೊಂಡು ಧಾರ್ಮಿಕ ಕಾರ್ಯ ಮಾಡಬಹುದು. ಹೊಸ ವ್ಯವಹಾರ ಪ್ರಾರಂಭಿಸಿರುವವರಿಗೆ ಗೊಂದಲ. ಸಾಲವನ್ನು ವೇಗವಾಗಿ ಪಡೆಯುವಿರಿ. ಸ್ನೇಹಿತರ ಮಾತುಗಳು ದಾರಿ ತಪ್ಪಿಸಬಹುದು. ಕೋಪವನ್ನು ನಿಯಂತ್ರಿಸಿ.

ವೃಶ್ಚಿಕ ರಾಶಿ

ಇಂದು ಹೊಸ ಮನೆಯ ಆರಂಭ ಸಾಧ್ಯ. ಐಷಾರಾಮಿ ಖರ್ಚು ಹೆಚ್ಚಾಗುತ್ತದೆ. ಆರೋಗ್ಯದ ಕಡೆ ಎಚ್ಚರಿಕೆ ಅಗತ್ಯ. ನಿಮ್ಮ ಪ್ರತಿಭೆ ಇಂದು ಮೆರೆದಾಡುತ್ತದೆ. ಸಂಗಾತಿಯೊಂದಿಗೆ ಕಲಹ ಬಗೆಹರಿಸಬೇಕು. ಪುಣ್ಯ ಸ್ಥಳದ ಸಂದರ್ಶನದಿಂದ ಮನಸ್ಸು ಶಾಂತಿಯಾಗುತ್ತದೆ. ಹೆಚ್ಚಿನ ಮಾತು ಬೇಡ, ಕೆಲಸದ ಕಡೆ ಗಮನಕೊಡಿ. ನೀರಿನ ಬಗ್ಗೆ ಭಯ ಕಾಣಬಹುದು.

ಧನು ರಾಶಿ

ಮೋಸದ ಜಾಲದಲ್ಲಿ ಸಿಕ್ಕಿಬೀಳುವಿರಿ. ನಿಮ್ಮ ವರ್ತನೆ ಅಧಿಕಾರ ಕಳೆದುಕೊಳ್ಳುವಂತೆ ಮಾಡಬಹುದು. ಸಹೋದರರೊಂದಿಗೆ ಅಂತರ ಉಂಟಾಗಬಹುದು. ಹಳೆಯ ಹರಕೆಯನ್ನು ತೀರಿಸುವುದು ಉತ್ತಮ. ಸಂಗಾತಿಯೇ ಕೆಲಸದಲ್ಲಿ ಸಹಾಯ ಮಾಡಬಹುದು. ಸರ್ಕಾರದಲ್ಲಿ ಕೆಲಸ ಸುಗಮವಾಗಲಿದೆ. ಆದರೆ ಇತರರ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ರಾಜಕೀಯ ಗಾಳಿ ಬೀಸಬಹುದು.

ಮಕರ ರಾಶಿ

ನಿಮ್ಮ ಸುಪ್ತ ಕೌಶಲ್ಯಕ್ಕೆ ಅವಕಾಶ ಸಿಗಲಿದೆ. ಆದರೆ ಸುರಕ್ಷತೆಯ ಕಡೆ ಗಮನವಿರಲಿ. ಪ್ರಯಾಣದಲ್ಲಿ ಸುಖವಿರದು. ಮಾತಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಸಾಧ್ಯ. ವಿದ್ಯಾರ್ಥಿಗಳಿಗೆ ಸಂತೋಷದ ಸುದ್ದಿ. ಸಂಸ್ಥೆಯ ಯಶಸ್ಸಿಗೆ ನಿಮ್ಮ ಕಾರ್ಯಪರತೆ ಕಾರಣವಾಗಲಿದೆ. ವಿವಾದಗಳಿಂದ ದೂರವಿರಿ. ತಾಳ್ಮೆ ಮುಖ್ಯ.

ಕುಂಭ ರಾಶಿ

ಪ್ರೇಮಿಗಳು ಇತರರನ್ನು ಆಕರ್ಷಿಸುವಂತೆ ವರ್ತಿಸುವರು. ಆದರೆ ಯೋಜನೆಗಳಲ್ಲಿ ವಿಫಲತೆ ಸಾಧ್ಯ. ಮಕ್ಕಳೊಂದಿಗೆ ಸಂತೋಷ ಸಮಯ. ಆದರೆ ಅನಿವಾರ್ಯವಾಗಿ ಅನಿಸಿದ್ದನ್ನು ಹೇಳಿ ನಂತರ ಪಶ್ಚಾತ್ತಾಪಪಡಬಹುದು. ವ್ಯವಹಾರದಲ್ಲಿ ಮೋಸ ಸಾಧ್ಯ. ತಾಯಿಯಿಂದ ಸಹಾಯ ದೊರಕಲಿದೆ. ಆರೋಗ್ಯ ಸಮಸ್ಯೆ, ಉಸಿರಾಟ ತೊಂದರೆ ಕಾಣಬಹುದು. ಭೂಮಿ ಖರೀದಿಸುವವರು ದಾಖಲೆಯನ್ನು ಚೆನ್ನಾಗಿ ಪರಿಶೀಲಿಸಬೇಕು.

ಮೀನ ರಾಶಿ

ಇಂದು ನೀವು ಅವಧಿಯೊಳಗೆ ಕೆಲಸ ಮುಗಿಸುವಿರಿ. ಆಸ್ತಿಯ ಆಧಾರದ ಮೇಲೆ ಸಾಲ ಪಡೆಯುವ ಸಾಧ್ಯತೆ. ಜೀವನದಲ್ಲಿ ಯಾರಾದರೂ ಬೆಂಬಲ ಅಗತ್ಯವೆನಿಸಬಹುದು. ಅನಪೇಕ್ಷಿತ ವಿಷಯಗಳನ್ನು ಹಂಚಿಕೊಳ್ಳಬೇಡಿ. ವಾಹನದಿಂದ ಸಣ್ಣ ಲಾಭ. ಪ್ರಭಾವಿಗಳ ಜೊತೆ ಸಂಬಂಧ ಬೆಳೆಸುವಿರಿ. ಗೃಹ ನಿರ್ಮಾಣ ಕಾರ್ಯದಲ್ಲಿ ಅತಿಯಾದ ಗಡಿಬಿಡಿ ಬೇಡ. ಆರೋಗ್ಯ ಸರಿಯಿಲ್ಲದ ಕಾರಣ ಕೋಪ ಹೆಚ್ಚಾಗುತ್ತದೆ.

ಇಳಿಕೆಯ ನಂತರ ಅಡಿಕೆ ಧಾರಣೆ ಪುನಃ ಏರಿಕೆ: ರೈತರಲ್ಲಿ ಹೊಸ ಭರವಸೆ

Leave a Comment