Bagar hukum : ರಾಜ್ಯದ ಬಗರ್ ಹುಕುಂ ರೈತರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಜಮೀನು ಮಂಜೂರು

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Bagar hukum :ರಾಜ್ಯದಲ್ಲಿ ಬಗರ್ ಹುಕುಂ ಜಮೀನು ಮಂಜೂರಾತಿ ಕುರಿತಾಗಿ ಉಂಟಾಗಿರುವ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಕೃಷಿ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ಯಾವುದನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಗರ ಹುಕುಂ ಸಮಿತಿ ಮುಂದೆ ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬುದು ಕಾನೂನಿನ ಪ್ರಕ್ರಿಯೆ. ಹೀಗಾಗಿ ಅಧಿಕಾರಿಗಳು ಅರ್ಹತೆಯಿಲ್ಲದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕರಿಸುತ್ತಾರೆ. ಈ ಎಲ್ಲಾ ಕ್ರಮಗಳು ಕಾನೂನಿನ ಆಧಾರದಲ್ಲೇ ನಡೆಯುತ್ತಿವೆ. ಆದರೆ ಏನಾದರು ಕಣ್ತಪ್ಪುಗಳಿಂದಾಗಿ ರೈತರಿಗೆ ಅನ್ಯಾಯವಾಗಿದ್ದರೆ, ಅದನ್ನು ಶಾಸಕರು ತಮ್ಮ ಗಮನಕ್ಕೆ ತಂದರೆ ತಕ್ಷಣ ಸಮಸ್ಯೆ ಪರಿಹರಿಸುವ ಮತ್ತು ಸರಿಪಡಿಸುವ ಭರವಸೆ ನೀಡಿದರು.

ಅನರ್ಹ ಅರ್ಜಿಗಳ ಅಂಕಿ-ಅಂಶ

ಬಗರ್ ಹುಕುಂ ಹೆಸರಿನಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಸಂದರ್ಭ, ಅನರ್ಹ ಅರ್ಜಿಗಳ ಸಂಖ್ಯೆಯೂ ಹೆಚ್ಚಿದೆ ಎನ್ನುವುದನ್ನು ಅವರು ವಿವರಿಸಿದರು. 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಂದ ಮಾತ್ರ 7,564 ಅರ್ಜಿಗಳು ಬಂದಿವೆ. ರಸ್ತೆ ಅಥವಾ ಸರ್ಕಾರಿ ಭೂಮಿಯ ಮೇಲೆ ಒತ್ತುವರಿ ಮಾಡಿಕೊಂಡಿರುವವರಿಂದ 33,632 ಅರ್ಜಿಗಳು, ಅರಣ್ಯ ಭೂಮಿಯ ಮೇಲೆ ಮಂಜೂರಾತಿಗೆ 1,00,565 ಅರ್ಜಿಗಳು, ನಗರ ವ್ಯಾಪ್ತಿಯಲ್ಲಿ 69,850 ಅರ್ಜಿಗಳು ಬಂದಿದೆ. ಜೊತೆಗೆ ಆ ತಾಲೂಕಿನಲ್ಲಿ ವಾಸಿಸದವರಿಂದ 1,620 ಅರ್ಜಿಗಳು, ಕೃಷಿಕರೇ ಅಲ್ಲದವರಿಂದ 13,488 ಅರ್ಜಿಗಳು, ಸ್ವಾಧೀನದಲ್ಲಿಯೇ ಜಮೀನಿಲ್ಲದವರಿಂದ 44,517 ಅರ್ಜಿಗಳು, ಅಮೃತ್ ಮಹಲ್ ಕಾವಲ್ ಜಮೀನಿಗೆ 13,488 ಅರ್ಜಿಗಳು ಮತ್ತು ಕೆರೆ ಭೂಮಿಗೆ 3,040 ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಅರ್ಜಿಗಳೆಲ್ಲ ಕಾನೂನಾತ್ಮಕವಾಗಿ ಅನರ್ಹವಾಗಿರುವುದರಿಂದ ಸಮಿತಿಯ ಹಂತದಲ್ಲಿಯೇ ನಿರಾಕರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

📢 Stay Updated! Join our WhatsApp Channel Now →

ಪಡಾ–ಬೀಳು ಜಮೀನಿನ ಪ್ರಶ್ನೆಯ ಉತ್ತರಿಸುವಾಗ, ಕೆಲ ಜಮೀನುಗಳು ಈಗಾಗಲೇ ಅರಣ್ಯ ಇಲಾಖೆ, ಸರ್ಕಾರಿ ಕಚೇರಿ, ಸಾರ್ವಜನಿಕ ಉದ್ದೇಶ ಅಥವಾ ಸ್ಮಶಾನಗಳಿಗೆ ಮೀಸಲಾಗಿವೆ. ಹೀಗಾಗಿ ಈ ಜಮೀನುಗಳ ಸ್ವಾಧೀನ ಘಟಿತದ ಸಂಪೂರ್ಣ ಅಧ್ಯಯನ ನಡೆಸಿದ ಬಳಿಕವೇ ನಿಜವಾದ ಕೃಷಿಕರಿಗೆ ಭೂಮಿ ಮಂಜೂರು ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗೊಂದಲಗಳು ಉದ್ಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಗೋಮಾಳ ಜಮೀನನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದಾರೆಂಬ ಆರೋಪಕ್ಕೂ ಸಚಿವರು ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರ ಬಂದ ಬಳಿಕ ಕಾನೂನು ಮೀರಿ ಯಾವುದನ್ನೂ ಮಾಡಿಲ್ಲ. ಕಾನೂನಿನ ನಿಯಮವನ್ನು ಅಕ್ಷರಶಃ ಪಾಲಿಸುತ್ತಿದ್ದೇವೆ. ಅದರಲ್ಲಿ ಬದಲಾವಣೆ ಮಾಡಿ ಇದ್ದರೆ ನೀವು ಹೇಳಿ ನಾವು ತಿದ್ದುಕೊಳ್ಳುತ್ತೇವೆ ಎಂದರು. ಹಿಂದಿನ ಸರ್ಕಾರಗಳಲ್ಲಿ ಕೆಲ ಸಂದರ್ಭಗಳಲ್ಲಿ ಜಂಗಲ್ ಅಥವಾ ಬಿ-ಖರಾಬು ಭೂಮಿಯ ಮಂಜೂರಾತಿಯಲ್ಲಿ ತಪ್ಪುಗಳು ನಡೆದವು. ಅದನ್ನು ಸರಿಪಡಿಸಲು ಈಗಾಗಲೇ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಲಾಗಿದೆ.

ಇದಲ್ಲದೆ ಒಂದೇ ಕುಟುಂಬಕ್ಕೆ 119 ಎಕರೆ ಭೂಮಿಯನ್ನು ನೀಡಿರುವ ಪ್ರಕರಣ ಜತೆಗೆ, ಜಂಗಲ್ ಖರಾಬು ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ಹಲವು ಪ್ರಕರಣಗಳು ವಿಚಾರಣೆಯಲ್ಲಿವೆ. ವಿಚಾರಣೆ ಶೀಘ್ರ ಮುಗಿಯುವಂತೆ ಸೂಚನೆ ನೀಡಲಾಗಿದ್ದು, ನಂತರ ಅವುಗಳಲ್ಲಿ ಅನರ್ಹ ಮಂಜೂರಿಗಳು ಕಂಡುಬಂದರೆ ರದ್ದುಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ನಿಜವಾದ ರೈತರಿಗೆ ಬಗರ ಹುಕುಂ ಅಡಿ ಜಮೀನು ಖಚಿತ, ಆದರೆ ಅಕ್ರಮ ಅಥವಾ ಅನರ್ಹ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಅವಕಾಶವಿಲ್ಲ.

Leave a Comment