ಕರ್ನಾಟಕ ಬಾಡಿಗೆ ಕಾಯ್ದೆಗೆ ತಿದ್ದುಪಡಿ: ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ಸರ್ಕಾರದ ಬಿಗ್‌ ಶಾಕ್!

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Karnataka House Rent Rules:ರಾಜ್ಯದಲ್ಲಿ ಮನೆ ಬಾಡಿಗೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕರ್ನಾಟಕ ಬಾಡಿಗೆ ಕಾಯ್ದೆ 1999ಕ್ಕೆ ಮಹತ್ವದ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದ್ದು, ಇದು ಮನೆ ಮಾಲೀಕರಿಗೂ ಮತ್ತು ಬಾಡಿಗೆದಾರರಿಗೂ ಸಮಾನವಾಗಿ ಅನ್ವಯವಾಗಲಿದೆ.

ಹೊಸ ನಿಯಮದಂತೆ, ಬಾಡಿಗೆ ಮನೆಯನ್ನ ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನು ₹5,000ರಿಂದ ₹50,000ರವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದು ಸುಮಾರು 90% ಹೆಚ್ಚಳವಾಗಲಿದೆ.

📢 Stay Updated! Join our WhatsApp Channel Now →

ಇದೇ ನಿಯಮ ಉಲ್ಲಂಘನೆಗೆ ಬಾಡಿಗೆದಾರರಷ್ಟೇ ಅಲ್ಲದೆ, ಮನೆ ಮಾಲೀಕರಿಗೂ ದಂಡ ವಿಧಿಸಲಾಗುತ್ತದೆ. ಬಾಡಿಗೆ ಮನೆಯನ್ನ ಬೇರೆಯವರಿಗೆ ನೀಡಲು ಅವಕಾಶ ಮಾಡಿಕೊಟ್ಟರೆ, ಅಂತಹ ಮನೆ ಮಾಲೀಕರಿಗೆ ₹3,000ರಿಂದ ₹30,000ರವರೆಗೆ ದಂಡ ವಿಧಿಸಲು ಸರ್ಕಾರ ತೀರ್ಮಾನಿಸಿದೆ.

ಹಿಂದಿನಂತೆ ಜೈಲು ಶಿಕ್ಷೆ ವಿಧಿಸುವ ಬದಲು, ದಂಡದ ಮೊತ್ತವನ್ನು ಹೆಚ್ಚಿಸಿ ಜಾರಿಗೊಳಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

ದುಬಾರಿ ಬಾಡಿಗೆಗೆ ಬ್ರೇಕ್:

ಬಾಡಿಗೆ ದರವನ್ನು ನಿಯಂತ್ರಿಸಲು ಸರ್ಕಾರ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಬಾಡಿಗೆ ದರ ನಿಗದಿ ಮಾಡುವ ವ್ಯವಸ್ಥೆ ತರಲು ಯೋಚಿಸಿದೆ. ಇದರಿಂದ ದುಬಾರಿ ಬಾಡಿಗೆಗೆ ಬ್ರೇಕ್‌ ಬೀಳುವ ನಿರೀಕ್ಷೆಯಿದೆ.

ಸರ್ಕಾರದ ಈ ತಿದ್ದುಪಡಿ ಮಸೂದೆ ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನ ಹೆಚ್ಚಳ!

Leave a Comment