E-Khata ಗೊಂದಲ : ಬಿಬಿಎಂಪಿ ಸ್ಪಷ್ಟನೆ ಮತ್ತು ಹೊಸ ಆನ್‌ಲೈನ್ ವ್ಯವಸ್ಥೆ !

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

E-Khata ರಾಜಧಾನಿ ಬೆಂಗಳೂರಿನಲ್ಲಿ ಇ-ಖಾತಾ ಯೋಜನೆ ಜಾರಿಯಾದರೂ, ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಸಂಪೂರ್ಣ ಪರಿಹಾರಗೊಂಡಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರೋಕ್ಷವಾಗಿ ಈ ಗೊಂದಲವನ್ನು ಒಪ್ಪಿಕೊಂಡಿದ್ದು, ಪ್ರತಿದಿನ ಸುಮಾರು 1000ಕ್ಕೂ ಹೆಚ್ಚು ಕರೆಗಳು ಇ-ಖಾತಾ ಸಹಾಯವಾಣಿಗೆ ಬರುತ್ತಿವೆ ಎಂದು ಪ್ರಕಟಿಸಿದೆ.

ಬಿಬಿಎಂಪಿ ಇ-ಖಾತಾ ಸಹಾಯವಾಣಿ 94806 83695ಗೆ ಹೆಚ್ಚಿನ ಕರೆಗಳು ಮಾಹಿತಿ ಪಡೆಯಲು ಬರುತ್ತಿವೆ. ಬೆಂಗಳೂರಿನಲ್ಲಿ ಆಸ್ತಿಗಳ ಖರೀದಿ-ಮಾರಾಟದಲ್ಲಿ ಯಾವುದೇ ಲೋಪವಾಗಬಾರದು ಎಂಬ ಉದ್ದೇಶದಿಂದ ಇ-ಖಾತಾ ಪರಿಚಯಿಸಲಾಯಿತು. ಎಲ್ಲ ಆಸ್ತಿದಾರರಿಗೂ ಇದು ಕಡ್ಡಾಯವಾಗಿದ್ದರೂ, ಇನ್ನೂ ಅನೇಕರು ಗೊಂದಲದಲ್ಲಿದ್ದಾರೆ.

📢 Stay Updated! Join our WhatsApp Channel Now →

ಇ-ಖಾತಾ ಸಂಬಂಧಿತ ಯಾವುದೇ ದೂರು ಬಂದರೆ, ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಪರಿಹಾರಗೊಂಡ ದೂರುಗಳನ್ನು ಸಾರ್ವಜನಿಕರೊಂದಿಗೆ ಪರಿಶೀಲಿಸಿ, ತೃಪ್ತಿಯಿಲ್ಲದಿದ್ದರೆ ಮರುಸ್ಥಾಪನೆ ಮಾಡಲಾಗುತ್ತದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 124 ದೂರುಗಳು ಮಾತ್ರ ಬಾಕಿ ಇವೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ವಿನಂತಿ:ಇ-ಖಾತಾ ಸಂಬಂಧಿತ ಯಾವುದೇ ವಿಷಯಗಳಿಗೆ ಬಿಬಿಎಂಪಿ ಕಚೇರಿಗಳಿಗೆ ನೇರವಾಗಿ ಹೋಗದೆ, ಸಹಾಯವಾಣಿಯನ್ನು ಸಂಪರ್ಕಿಸಲು ಬಿಬಿಎಂಪಿ ಮನವಿ ಮಾಡಿದೆ.

ಆನ್‌ಲೈನ್ ವ್ಯವಸ್ಥೆ ಶೀಘ್ರದಲ್ಲೇ:ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಎ-ಖಾತಾ ಅರ್ಜಿಯನ್ನು ಸಲ್ಲಿಸಲು ಶೀಘ್ರದಲ್ಲೇ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

Read More>>ಪೋಸ್ಟ್ ಆಫೀಸ್ RD ಯೋಜನೆ 2025: ತಿಂಗಳಿಗೆ ₹5,000 ಹೂಡಿಕೆ ಮಾಡಿ 10 ವರ್ಷದಲ್ಲಿ ₹8.54 ಲಕ್ಷ ಪಡೆಯಿರಿ

Leave a Comment