E-Aadhaar APP :ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಈಗ ದೇಶಾದ್ಯಾಂತ QR ಕೋಡ್ ಆಧಾರಿತ ಹೊಸ e-Aadhaar ವ್ಯವಸ್ಥೆ ಆರಂಭಿಸಲು ಸಿದ್ಧವಾಗಿದೆ. ಈ ಸಿಸ್ಟಮ್‌ನ್ನು 2025ರ ಅಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯ ಮೂಲಕ, ಆಧಾರ್ ಕಾರ್ಡ್ ಹೊಂದಿರುವವರು ಫಿಜಿಕಲ್ ಫೋಟೋಕಾಪಿ ಬೇಕಾಗದೆ ಡಿಜಿಟಲ್ ರೂಪದಲ್ಲಿ ತಮ್ಮ ಗುರುತನ್ನು ತಪಾಸಣೆ ಮಾಡಿಸಿಕೊಳ್ಳಬಹುದು.
UIDAI ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಕುಮಾರ್ ಮಾಹಿತಿ ನೀಡಿದ್ದು, ಪ್ರಸ್ತುತ ದೇಶಾದ್ಯಾಂತ 1 ಲಕ್ಷ ಆಧಾರ್ ಅತಂಟಿಕೇಶನ್ ಸಾಧನಗಳ ಪೈಕಿ ಸುಮಾರು 2,000 ಡಿವೈಸ್‌ಗಳನ್ನು ಈಗಾಗಲೇ QR ಕೋಡ್ ಸಪೋರ್ಟ್‌ಗಾಗಿ ಅಪ್‌ಡೇಟ್ ಮಾಡಲಾಗಿದೆ. ಶೀಘ್ರದಲ್ಲೇ ಇನ್ನುಮತ್ತು ಡಿವೈಸ್‌ಗಳನ್ನು ಈ ಹೊಸ ತಂತ್ರಜ್ಞಾನಕ್ಕೆ ಹೊಂದಾಣಿಕೆಯಾಗುವಂತೆ ರೂಪಾಂತರಗೊಳಿಸಲಾಗುವುದು.
ಹೊಸ e-Aadhaar ಮೊಬೈಲ್ ಅಪ್ಲಿಕೇಶನ್‌ನಿಂದ ಮನೆಲ್ಲೇ ಅಪ್‌ಡೇಟ್ ಮಾಡಿ ನಿಮ್ಮ ಡಿಟೇಲ್ಸ್

UIDAI ಹೊಸ e-Aadhaar ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಅಪ್ಲಿಕೇಶನ್‌ನಿಂದ ಬಳಕೆದಾರರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕದಂತಹ ವೈಯಕ್ತಿಕ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಸುಲಭವಾಗಿ ಬದಲಾಯಿಸಿಕೊಳ್ಳಬಹುದು.
ಹಿಂದಿನಂತೆ ಆಧಾರ್ ಕೇಂದ್ರಕ್ಕೆ ಹೋಗಬೇಕಿಲ್ಲ – ಈ ಅಪ್ಲಿಕೇಶನ್ ಮೂಲಕ ನಿಮ್ಮ ಡಾಕ್ಯುಮೆಂಟ್ ಸಬ್ಮಿಟ್ ಮಾಡಿ, ಆನ್‌ಲೈನ್‌ಲಲ್ಲೇ ದಾಖಲೆ ಪರಿಶೀಲನೆಗೆ ಅವಕಾಶ ದೊರೆಯುತ್ತದೆ.
ಇದರಿಂದ ಜನರಿಗೆ ಲಾಭವೇನು?
- ಹೆಚ್ಚು ವೇಗವಾಗಿ ಗುರುತು ತಪಾಸಣೆ
- ಡಿಜಿಟಲ್ ದಾಖಲೆ ನಿರ್ವಹಣೆ
- ದಾಖಲೆಗಳನ್ನು ಸಾಬೀತು ಪಡಿಸಲು ಫಿಜಿಕಲ್ ಕಾಪಿ ಅಗತ್ಯವಿಲ್ಲ
- ನಿಮ್ಮ ಮಾಹಿತಿಯ ಅಪ್‌ಡೇಟ್ ಕೆಲಸಗಳನ್ನು ನೀವು ಮನೆಲ್ಲೇ ಮುಗಿಸಬಹುದು
UIDAI ಯ ಈ ಹೊಸ ಕ್ರಮದಿಂದ ಆಧಾರ್ ನನ್ನು ಹೆಚ್ಚು ಪ್ರಾಯೋಗಿಕ, ಸುಲಭ ಮತ್ತು ಸುರಕ್ಷಿತವಾಗಿ ಬಳಕೆ ಮಾಡಬಹುದಾಗಿದೆ.ಇದು ಡಿಜಿಟಲ್ ಇಂಡಿಯಾದತ್ತ ಮತ್ತೊಂದು ಬೃಹತ್ ಹೆಜ್ಜೆ.
Read More :ಪಡಿತರ ಚೀಟಿ ತಿದ್ದುಪಡಿ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ, ಡೆಡ್‌ಲೈನ್ ಹಾಗೂ ಅರ್ಜಿ ಪ್ರಕ್ರಿಯೆ
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”