ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ : 20ನೇ ಕಂತಿನ ಅರ್ಹ ರೈತರ ಪಟ್ಟಿ ಮೊಬೈಲ್‌ನಲ್ಲಿ ಚೆಕ್ ಮಾಡುವುದು ಹೇಗೆ ?

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

PM kisan Yojane :ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2 ರಂದು ಉತ್ತರ ಪ್ರದೇಶದ ವಾರಾಣಸಿಯಿಂದ ಬಿಡುಗಡೆ ಮಾಡಿದ್ದಾರೆ. ಈ ಕಂತಿನಡಿ 9.7 ಕೋಟಿ ರೈತರಿಗೆ ₹2,000 ರಷ್ಟು ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಇದರಿಂದಾಗಿ ಸಾವಿರಾರು ರೈತರು ಆರ್ಥಿಕ ಸಹಾಯವನ್ನು ಪಡೆದಿದ್ದು, ಅವರ ಮುಖಗಳಲ್ಲಿ ಸಂತೋಷ ಮೂಡಿದೆ.

ಆದರೆ ಕೆಲವರು ಇನ್ನು ತಮ್ಮ ಖಾತೆಗಳಿಗೆ ಹಣ ಜಮೆಯಾಗಿಲ್ಲವೆಂದು ದೂರುತ್ತಿದ್ದಾರೆ. ಅಂತಹ ರೈತರು ಯಾವುದೇ ಗೊಂದಲಕ್ಕೊಳಗಾಗದೆ, ಸರಿಯಾದ ಕ್ರಮಗಳನ್ನು ಅನುಸರಿಸಿದರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ಅರ್ಹರ ಪಟ್ಟಿಯನ್ನು ಮೊಬೈಲ್‌ನಲ್ಲಿ ಹೇಗೆ ನೋಡಬಹುದು?

📢 Stay Updated! Join our WhatsApp Channel Now →

ಕೆಂದ್ರ ಕೃಷಿ ಸಚಿವಾಲಯದ ಅಧಿಕೃತ ಜಾಲತಾಣ www.pmkisan.gov.in ನಲ್ಲಿ ರೈತರ ಹೆಸರು ಮತ್ತು ಪಟ್ಟಿಯನ್ನು ನೋಡಬಹುದಾಗಿದೆ. ಇಲ್ಲಿ ಸಿಕ್ಕ ಪ್ರತಿಯೊಬ್ಬ ರೈತನು ಈ ಕ್ರಮ ಅನುಸರಿಸಿ ಅರ್ಹರ ಪಟ್ಟಿಯನ್ನು ಪರಿಶೀಲಿಸಬಹುದು:

  1. ಮೊಬೈಲ್‌ನಲ್ಲಿ ಬ್ರೌಸರ್ ತೆರೆಯಿ.
  2. ವೆಬ್‌ಸೈಟ್ ಪ್ರವೇಶಿಸಿ: www.pmkisan.gov.in
  3. Farmers Corner” ವಿಭಾಗಕ್ಕೆ ಹೋಗಿ.
  4. Beneficiary List” ಆಯ್ಕೆಮಾಡಿ.
  5. ನಿಮ್ಮ ರಾಜ್ಯ (State), ಜಿಲ್ಲೆ (District), ತಾಲೂಕು (Sub-district), ಹೋಬಳಿ (Block), ಮತ್ತು ಗ್ರಾಮ (Village) ಆಯ್ಕೆ ಮಾಡಿ.
  6. Get Report” ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದ ಅರ್ಹ ರೈತರ ಪಟ್ಟಿ ಸಿಗುತ್ತದೆ.

ಹಣ ಬಂದಿಲ್ಲವೇ? ಚೆಕ್ ಮಾಡಿ:

1. ನಿಮ್ಮ ಅರ್ಹತೆ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ:

  • ಅಧಿಕೃತ ಜಾಲತಾಣ www.pmkisan.gov.in ಗೆ ಹೋಗಿ
  • Farmers Corner ವಿಭಾಗಕ್ಕೆ ಹೋಗಿ
  • ‘Beneficiary Status’ ಆಯ್ಕೆ ಮಾಡಿ
  • ನಿಮ್ಮ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ
  • ನಿಮ್ಮ ಪಾವತಿ ಸ್ಥಿತಿಯನ್ನು ಪರಿಶೀಲಿಸಿ

2. ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ:

ಯಾವುದೇ ತೊಂದರೆ ಇದ್ದರೆ ಈ ನಂಬರಿಗೆ ಕರೆ ಮಾಡಿ:

  • PM-KISAN ಸಹಾಯವಾಣಿ: 1800-180-1551
  • ಕಾಲ್ಸೆಂಟರ್: 155261
  • ಕೃಷಿ ಇಲಾಖೆ ಸಹಾಯವಾಣಿ: 011-24300606 / 011-23381092

3. ಇಮೇಲ್ ಮೂಲಕ ದೂರು ಸಲ್ಲಿಸಿ:

  • ನಿಮ್ಮ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಹಾಗೂ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಈ ಇಮೇಲ್‌ಗೆ ಕಳುಹಿಸಬಹುದು: pmkisan-ict@gov.in

4. ನಿಮ್ಮ ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಿ:

ನಿಕಟದ CSC ಕೇಂದ್ರ ಅಥವಾ ತಾಲೂಕು ಕೃಷಿ ಕಚೇರಿಗೆ ಭೇಟಿ ನೀಡಿ. ನೀವು ಅರ್ಹರಾಗಿದ್ದರೂ ಹಣ ಬಂದಿಲ್ಲದಿದ್ದರೆ, ಅವರಿಗೆ ದಾಖಲೆಗಳನ್ನು ತೋರಿಸಿ ಸಹಾಯ ಪಡೆಯಬಹುದು.


ವರ್ಷಕ್ಕೆ ₹6,000 – ರೈತರಿಗೆ ಸ್ಥಿರ ಸಹಾಯಧನ:

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ರಷ್ಟು ಹಣವನ್ನು ಮೂರು ಕಂತುಗಳಾಗಿ ನೀಡಲಾಗುತ್ತದೆ. ಪ್ರತಿ ಕಂತು ₹2,000 ಇರುತ್ತದೆ. ಈ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.


ಪಿಎಂ ಕಿಸಾನ್ ಯೋಜನೆಯಡಿ 20ನೇ ಕಂತಿನ ಹಣ ಈಗಾಗಲೇ ಬಿಡುಗಡೆಗೊಂಡಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೂ ಹಣ ಬಂದಿಲ್ಲದಿದ್ದರೆ, ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ತಕ್ಷಣವೇ ದೂರು ಸಲ್ಲಿಸಿ. ಸರ್ಕಾರ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಸಾಧ್ಯತೆ ಹೆಚ್ಚು.

Read More >>ಪೋಸ್ಟ್ ಆಫೀಸ್ ಯೋಜನೆ : ದಿನಕ್ಕೆ ಕೇವಲ ₹400 ಉಳಿಸಿ ₹70 ಲಕ್ಷ ಗಳಿಸುವ ಬಂಪರ್ ಯೋಜನೆ

Leave a Comment